Thursday, September 30, 2010

ಕನಸು

ಕತ್ತಲಲ್ಲಿ ಕಾಣಿಸಿತ್ತು ಬೆಳಕಿನ ಕನಸು. ಅಲ್ಲಲ್ಲಿ ನಕ್ಷತ್ರದಂತೆ ಚಿಮುಕಿತ್ತು ಬೆಳಕು. ಕತ್ತಲಲ್ಲಿ ಬಿಳಿ ಮುತ್ತಿನಂತೆ ಚೆದುರಿತ್ತು. ಒಂದೊಂದನ್ನೇ ಹೆಕ್ಕಿ ಪೋಣಿಸಿ ಇಡಬೇಕು ಅನ್ನಿಸಿತ್ತು. ಬೆಳಕಿನ ನಕ್ಷತ್ರಗಳ ನಡುವೆ ನನ್ನ ಚಂದಿರ ಕಾಣಿಸಲಿಲ್ಲ. ನಿನ್ನ ನೋಡುವ ಆಸೆಯಲಿ ನಿನ್ನೆಡೆಗೆ ಕೈ ಚಾಚಿದೆ.

ಅದು ನಿನ್ನ ಸ್ಪರ್ಶವೆಂದೇ ಅನಿಸಿದ ಸ್ಪರ್ಶ. ನಿದ್ದೆಯಲಿ ನಿನ್ನೆಡೆಗೆ ಕೈ ಚಾಚಿದಾಗ ನನ್ನ ಕೈ ಬೆರಳುಗಳನ್ನು ನೇವರಿಸಿದ ಸ್ಪರ್ಶ. ನಿದ್ದೆಯಿಂದ ಎಚ್ಚರಾಗಿ ನಿನ್ನೆಡೆಗೆ ತಿರುಗಿದಾಗ ಅದೇ ನಿದ್ದೆಯಲಿ ನೀನು ಮೈ ಮರೆತಿದ್ದೆ. ಹಾಗಾದರೆ ಕನಸಲ್ಲಾ ನೀ ನನ್ನ ಸ್ಪರ್ಶಿಸಿದ್ದು? ನನ್ನನ್ನ ಒಬ್ಬಳೇ ಬಿಟ್ಟು ಕನಸು ಕಾಣುತ್ತಿಯ? ಸ್ವಲ್ಪ ಇರು. ನಾನು ಕೂಡ ಬರುತ್ತೀನಿ. ಜೊತೆಯಲ್ಲೇ ಕನಸಲ್ಲಿ ಮೈಮರೆಯೋಣ. ಕನಸಿಂದ ನನ್ನ ಎಚ್ಚರಿಸದೆ ಮತ್ತೆ ಮತ್ತೆ ನನ್ನ ಕೈ ನೇವರಿಸಿ ಚುಂಬಿಸು. ನಕ್ಷತ್ರಗಳ ನಡುವೆ ಚಂದಿರನಾಗಿ ಬಾ.

ನಿನ್ನವಳು.