ನಿನ್ನೆದೆ ಬಡಿತ ಕೇಳೋಣವೆಂದು ನಿನ್ನ ಎದೆಗೆ ಒರಗಿದರೆ ಅಲ್ಲಿಯೇ ನಿದ್ದೆ ಹೊಗಿಬಿಟಿದ್ದೆ. ನಿನ್ನ ಆಶ್ರಯ ಅದೆಷ್ಟು ನೆಮ್ಮದಿ ಕೊಡುತ್ತೆ. ಯಾವುದೇ ನೋವಲ್ಲಿ ಮನಸು ಒದ್ದಾಡಿದರೂ, ಅದೆಷ್ಟು ಸಂಕಟವಾದರೂ, ನೋವಿಗೆ ಯಾರೇ ಕೂಡ ಕಾರಣವಾದರೂ ನಿನ್ನಲ್ಲಿ ಹೇಳ್ಕೊಳ್ಳಲಿಲ್ಲ ಅಂದ್ರೆ ಸಮಾಧಾನ ಸಾಧ್ಯವೇ ಇಲ್ಲ. ನಿನ್ನ ಮಾತುಗಳು ನೋವನ್ನೆಲ್ಲ ಅಳಿಸಿ ನೆಮ್ಮದಿ ತುಂಬುತ್ತೆ. ನೀನು ಮೊದಲೇ ಯಾಕೆ ಸಿಗಲಿಲ್ಲ, ನೀನು ಸಿಕ್ಕಿದ ಮೇಲೆ ಯಾಕೆ ನನ್ನಿಂದ ಇಷ್ಟು ದಿನ ದೂರವಾಗಿದ್ದೆ ಅಂತ ಮನಸು ಹುಸಿ ಮುನಿಸು ತೋರಿಸ್ತಿದೆ. ನೀನು ಬಂದ ಮೇಲೆಯೇ ನನ್ನ ಜೀವನಕ್ಕೆ ಜೀವ ಬಂದದ್ದು. ನನ್ನ ಪ್ರತೀ ನೋವಿಗೂ, ಪ್ರತೀ ಕಷ್ಟಕ್ಕೂ, ಹೆಗಲು ಕೊಡುತ್ತಿಯಲ್ಲ? ನನ್ನ ಪ್ರತೀ ಭಾವನೆಗಳನ್ನ ಅರ್ಥ ಮಾಡ್ಕೋತಿಯಲ್ಲ? ನನ್ನನ್ನು ಹೀಗೆ ಇಷ್ಟೊಂದು ಇಷ್ಟ ಪಡುವ ನಿನಗೆ ನಾನು ಚಿರಋಣಿ. ನಿನ್ನ ಹೆಗಲಿಗೆ ಒರಗಿದ ಮೇಲೆ ನನಗೆ ಇನ್ನೇನು ಚಿಂತೆ. ಇನ್ನೆಲ್ಲ ಖುಷಿಯ ವಿಷಯಗಳೇ ತಾನೆ? ಆ ದೇವರಲ್ಲಿ ನನ್ನದೊಂದೇ ಪ್ರಾರ್ಥನೆ. ನಮ್ಮ ಈ ಪ್ರೀತಿಯ ಮೇಲೆ ಯಾರ ದೃಷ್ಟಿಯೂ ಬೀಳದಿರಲಿ ದೇವರೇ ಅಂತ.
Wednesday, August 3, 2011
Subscribe to:
Posts (Atom)