Tuesday, July 27, 2010

ನಿನ್ನ ಹೆಸರಿನ ಎಸಳು..

ಯಾಕೋ uneasy feeling ಕಾಡ್ತಾ ಇದೆ. ಮಾಡೋದಕ್ಕೆ ಕೆಲಸ ಇದ್ರುನು ಮಾಡಕ್ಕಾಗ್ತಿಲ್ಲ. ಒಂದ್ಸಲ ನಿನ್ನನ್ನ ನೋಡಿದ್ರೆ ಸರಿ ಹೋಗಬಹುದು ಅನ್ನಿಸ್ತಿದೆ. ಮನಸು ನಿನ್ ಮೇಲೆ ಎಷ್ಟು depend ಆಗಿದೆ ಅಲ್ವ. ಎಲ್ಲರೂ ಕೇಳ್ತಾರೆ ಯಾಕೆ ನಿನ್ನ ಬಗ್ಗೆ ಮಾತ್ರ ಬರಿತೀಯ ಅಂತ. ಸುಮ್ನೆ smile ಮಾಡೋದು ಬಿಟ್ರೆ ಬೇರೆ ಏನೂ ಹೇಳಕ್ಕಾಗಲ್ಲ. ಮೊದಲೆಲ್ಲ ಬರೀಬೇಕು ಅನ್ನಿಸಿದಾಗ ಮನಸ್ಸಿಗೆ ಬರೋ ವಿಷಯಗಳನ್ನ ಗೀಚುತ್ತಿದ್ದೆ. ಈಗ ನೀನಿಲ್ಲದ ವಿಷಯಗಳೇ ನಂಗೊತ್ತಿಲ್ಲ ಅನ್ಸುತ್ತೆ. ಮನಸ್ಸಿಗೆ ಬರೋದು ನೀನು ಮಾತ್ರ. ಆದ್ರೂನು ಒಂದೊಂದ್ಸಲ ಯೋಚನೆ ಮಾಡ್ತೀನಿ ನೀನಿಲ್ಲದ ವಿಷಯಗಳ ಬಗ್ಗೆ. ದೇವರಿಲ್ಲದ ಜಾಗ ಹುಡುಕಲು ಹೊರಟವನ ರೀತಿ ಆಗುತ್ತೆ ನನ್ನ ಪರಿಸ್ಥಿತಿ. ಕೆಲವೊಮ್ಮೆ ನೀನು ಮಾತಾಡ್ತಾ ಇರಬೇಕು, ನೀ ಹೇಳಿದ ಪ್ರತಿ ಅಕ್ಷರವನ್ನು ನೀ ಹೇಳಿದ ರೀತಿಯಲ್ಲೇ ನಾನು ಬರಿತಾ ಇರಬೇಕು ಅನ್ಸುತ್ತೆ. ನೀನು ಬರೋ ಮುಂಚೆ ಕೂಡ ನೀನು ಇರಲಿಲ್ಲ ಅಂತ ಕೂಡ ಈಗ ಅನ್ನಿಸ್ತಿಲ್ಲ. ಪ್ರತಿ ಇಲ್ಲಗಳಲ್ಲಿ ನೀನಿದಿಯ, ನಿನ್ನ ನೋಡೋ ಹಂಬಲ ಇದೆ. ನಂಗೊತ್ತು, ಈಗಲೇ ನಿನ್ನ ನೋಡ್ಬೇಕು ಅಂದ ತಕ್ಷಣ computer lock ಮಾಡಿ ಹೊರಡ್ತಿಯ ಅಂತ. ಆದ್ರೆ ಇವತ್ತು ನೋಡ್ಬೇಕು, ನಿನ್ನ ನೋಡೋ ಹಂಬಲ ಸಂಜೆ ತನಕ ಎಷ್ಟು ಉತ್ಕಟವಾಗುತ್ತೆ ಅಂತ. ಅಲ್ಲಿ ತನಕ ನೀ ಕೊಟ್ಟ ನೆನಪಿನ ಹೂಗಳ ಎಸಳುಗಳನ್ನು ಬಿಡಿಸಿ, ಪ್ರತಿ ಎಸಳಿನಲ್ಲಿ ನಿನ್ನ ಹೆಸರು ಬರಿತಾ ಇರ್ತೀನಿ. 

1 comment:

  1. Narendra S Gangolli13/1/11 1:17 AM

    Hai achu, this is narendra.thumba andre thumba thumbane kushiyaythu. ondakintha ondu baraha chennagide kane. its simply suer.try to something new subject. idanna illige nillisbeda. thumba dinadinda yenu bareda hage kantha illa.anyway keep moving. ninna kalpanegalu thumba ista aythu kane. by the by mail madodaidre edakke madu ok.
    nsgangolli@yahoo.com
    with best wishes.
    ---------------NARENDRA S GANGOLLI

    ReplyDelete