Tuesday, June 22, 2010

ಕನಸಲಿ ಸಿಗಲೇ?

ಈ ನಿಶಬ್ಧ ರಾತ್ರಿಯಲ್ಲಿ ಸಶಬ್ಧವಾಗಿ ನಿದ್ರಿಸಿ ಕನಸು ಕಾಣುತ್ತಿರುವ ಹುಡುಗ,

ಇವತ್ತು ಯಾರ ಕನಸು ಕಾಣುತ್ತ ಇದ್ದೀಯ? ಅಕ್ಕ ಪಕ್ಕದಲ್ಲಿ ಎಲ್ಲಿಯಾದರೂ ನಾನು ಇದಿನಾ? ನನ್ನ ಬಿಟ್ಟು ಒಬ್ಬನೇ ಕನಸು ಕಾಣಬೇಡ ಪ್ಲೀಸ್. ನನ್ನನ್ನು ಒಮ್ಮೆ ಕರೆ. ಅಯ್ಯೋ, ದಿನ ಪೂರ್ತಿ ಕಾಟ ತಡೆಯೋದೆ ಕಷ್ಟ, ಇನ್ನು ಕನಸಲ್ಲಿ ಬೇರೆ ಕರಿಬೇಕಾ ಅಂತ ಅಂದ್ಕೋತ ಇದ್ದೀಯ? ನೀನು ಪ್ರತಿ ಸಲ ನಿನ್ನ ಕನಸಿನ ಬಗ್ಗೆ ಹೇಳಿದಾಗ ಅಲ್ಲಿ ನಾನು ಕೂಡ ಇದಿನಾ ಅಂತ ಯೋಚನೆ ಮಾಡ್ತಾ ಇರುತ್ತೆ ಮನಸು. ಇನ್ನು ನಾನೇನು ಮಾಡ್ಲಿ? ಭಾವನೆಗಳನ್ನ ಕಂಟ್ರೋಲ್ ಮಾಡೋದನ್ನ ನಂಗೆ ಯಾರೂ ಕಲಿಸಲಿಲ್ಲ. ತಿಂಗಳ ಬೆಳಕಲ್ಲಿ ಕಾಣಿಸುತ್ತ ಇರೋ ನಿನ್ನ ಮುಖನ ನೋಡ್ತಾ ಇದ್ರೆ, ಹೇಳ್ದೆ ಕೇಳ್ದೆ ಹಾಗೆ ನುಗ್ಗಿ ನಿನ್ನ ಕನಸಲ್ಲ್ಲಿ ತೂರಿಕೊಳ್ಳೋಣ ಅನ್ಸುತ್ತೆ. ನೀನೇನು ಬೇಜಾರು ಮಾಡ್ಕೊಳಲ್ಲ ಅಂತ ಕೂಡ ನನ್ಗೊತು. ಅದ್ಕೆ ನೀನು ಅಂದ್ರೆ ಅಷ್ಟು ಸಲಿಗೆ. ಆದ್ರೆ promise ಮಾಡ್ತೀನಿ, ಕನಸಲ್ಲಿ ಬಂದು, ನಿಂಗೆ ಬೋರ್ ಆಗ್ತಾ ಇದ್ಯಾ, ಬೇಜಾರಾಗ್ತಾ ಇದ್ಯಾ, ನನ್ನ ಮೇಲೆ ಕೋಪಾನ, ಅಂತ ಸಿಲ್ಲಿ questions ಎಲ್ಲ ಕೇಳಲ್ಲ ಆಯ್ತಾ.

ಮತ್ತೆ, ಕನಸಲ್ಲಿ ಬಂದ ಮೇಲೆ ನನ್ನ ಹಳೆ ರಾಗ, ಕಾಲು ನೋವು, ಕೈ ನೋವು, ತಲೆ ನೋವು ಅಂತ ಹೇಳಿ ನಿಂಗೆ ಕೆಲಸ ಕೊಡಲ್ಲ. ನಿಂಗೆ ತಲೆ ಇದೆ ಅಂತ prove ಆಯಿತು ಅಂತ remind ಮಾಡೋಕ್ಕೆ ಆಸ್ಪದ ಕೊಡೋದೇ ಇಲ್ಲ :) ಕನಸಲ್ಲಿ ಬಂದು ಅದೇ ಹಳೆ ಲುಕ್ ಕೊಟ್ಟು ನನ್ನ ಗುರಾಯಿಸ್ತಾ ಇರ್ತಾಳೆ ಅಂತನೂ ಅಂದ್ಕೋಬೇಡ. ಪ್ರತಿ ದಿನ ಆ ಲುಕ್ ತಗೊಂಡು ನೀನು ಬೋರ್ ಆಗಿ ಹೋಗಿದಿಯ ಅಂತ ನಂಗೊತ್ತು :) ಇಷ್ಟೆಲ್ಲಾ ಹೇಳಿದ ಮೇಲೆ ನನ್ನನ್ನ ನಿನ್ನ ಕನಸಲ್ಲಿ ಕರೆದುಕೊಳ್ತಿಯಲ್ವ? ಹೇಳಿದ ಮಾತಿಗೆ ತಪ್ಪಿದರೆ next time ಕರ್ಕೊಳೋದು ಬೇಡ :)

ಈ ತರ ತಲೆ ತಿನ್ನೋದು ಬಿಟ್ಟು ಇವ್ಳು ಕನಸಲ್ಲ್ಲಿ ಬಂದು ಇನ್ನೇನು ಮಾಡಬಹುದು ಅಂತ ತಲೆ ಕೆಡಿಸಿಕೊಳ್ತಾ ಇದ್ದೀಯ? ನಿನ್ನ ಕನಸಲ್ಲಿ ನಾನು ಬರ್ತಿರೋದು ನಿನ್ನ ಮಾತು ಕೇಳೋಕೆ. ಇವತ್ತು ಮಾತ್ರ ನಂಗೆ ಏನೂ excuse ಕೊಡೊ ಹಾಗಿಲ್ಲ. ಇವತ್ತು ನೀನು ನಂಜೊತೆ ಮಾತಾಡೋಕೆ ಕೂತ್ಕೊಳ್ಳೆ ಬೇಕು. ಮನಸು ಹಗುರ ಆಗೋ ತನಕ..

ನಿನ್ನ ಮಾತು ಕೇಳೋಕೆ ಬರ್ತೀನಿ. ನೀನು ಮಾತಾಡ್ತಿಯ ಅನ್ನೋ ಆಸೆಯಿಂದ.

2 comments:

  1. ಒಂದು ತಿಂಗಳಿಂದ ಪತ್ರ ಬರೆದಿಲ್ಲ. ಹುಡುಗ ಮುನಿಸಿಕೊಂಡಾನು! :)

    ಅಂದಹಾಗೆ, ಚೆನ್ನಾಗಿದೆ ನಿಮ್ ಭಾವಲಹರಿಗಳು..

    ReplyDelete
  2. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಹುಡುಗ ಮುನಿಸಿಕೊಳಲ್ಲ ಅಂತ ಇಷ್ಟು ದಿನ ಬರೆದಿರಲಿಲ್ಲ. ಇನ್ನು ಮುನಿಸಿಕೊಳ್ಳುವ ಸಾಧ್ಯತೆ ಇದೆ :):) ಆದಷ್ಟು ಬೇಗ ಬರೀತೀನಿ. ನಮ್ಮ ಬ್ಲಾಗ್ ವರೆಗೆ ಹೆಜ್ಜೆ ಹಾಕಿದ್ದಕ್ಕೆ ಧನ್ಯವಾದ :)ಹೀಗೆ ಬರುತ್ತಿರಿ.

    ReplyDelete