ಇಷ್ಟೊತ್ತು ನಿನ್ನ photo ನೋಡ್ತಾ ಇದ್ದೆ. ಬ್ಲಾಗ್ನಲ್ಲಿ ನಾವಿಬ್ರು ಕೈ ಹಿಡ್ಕೊಂಡಿರೋ ಫೋಟೋ. ನಿನ್ನ ಕೈಯಲ್ಲಿ ಎಷ್ಟು ಪ್ರೀತಿ ಇದೆ ಅಂತ ಹುಡುಕುತ್ತಾ ಇದ್ದೆ. ನಿನ್ನ ಕೈಯಲ್ಲಿ ನಿನ್ನ ಮನಸನ್ನು ಓದ್ತಾ ಇದ್ದೆ. ಅದರ ಪಕ್ಕದಲ್ಲೇ ಬರೆದಿದೀನಿ "ಅನೂಹ್ಯ" ಅಂತ. ಬ್ಲಾಗ್ ಗೆ ಇಟ್ಟಿರೋ ಹೆಸರು ಅದು. ಈಗ ಅನ್ನಿಸ್ತ ಇತ್ತು, ಫೋಟೋಗೆ ಇಟ್ಟಿರೋ ಹೆಸರಾ ಅಂತ. ನೀನು ನನ್ನ ಕೈ ಹಿಡಿತೀಯ ಅಂತ ದೇವರು ನಂಗೆ ಯಾವ ಸೂಚನೆ ಕೂಡ ಕೊಟ್ಟಿರಲಿಲ್ಲ. ನಿನಗೂ ಕೂಡ ಕೊಟ್ಟಿರಲಿಲ್ಲ ಅಲ್ವ. ಇದನ್ನ ದೇವರು ಮೊದಲೇ ತೀರ್ಮಾನ ಮಾಡಿದ್ರ ಅಥವಾ sudden decision ತಗೊಂಡ್ರ ಅಂತ ಗೊತ್ತಾಗ್ಲಿಲ್ಲ. ಆದ್ರೆ ನೀನು ನಂಗೆ ಸಿಕ್ಕಿದಿಯ. ಇದಕ್ಕೆ ಪ್ರತಿಯಾಗಿ ನಿಂಗೆ ನಾನು ಏನು ಕೊಡಲಿ? ನಿಂಗೆ ಕೊಡೋವಷ್ಟು worth gift ನನ್ನ ಹತ್ರ ಇದೆಯಾ? ನನ್ನ ಹತ್ರ ಇರೋದು ಬರಿ silly things . ಈ silly things ಎಲ್ಲ ನಂಗೆ ಇರಲಿ. ನಿನಗೋಸ್ಕರ ಏನು ಕೊಡಲಿ? ಇದು ಎಷ್ಟೋ ದಿನದಿಂದ ಕಾಡ್ತಾ ಇರೋ ಪ್ರೆಶ್ನೆ. ನನ್ನಿಂದ ಉತ್ತರ ಸಿಗೋ ನಂಬಿಕೆ ಇಲ್ಲ. ಯಾಕೆ ಅಂದ್ರೆ ನಿಂಗೆ ಕೊಡೋಕ್ಕೆ ಆಗೋವಷ್ಟು precious gift ಈ silly ತಲೆಗೆ ಹೇಗೆ ಹೊಳಿಯುತ್ತೆ? ನಿನ್ನ ಪ್ರೀತ್ಸೋದೊಂದೇ ಗೊತ್ತಿರೋದು ನಂಗೆ. ನಿನ್ನ ಪ್ರೀತ್ಸೋದು ಬಿಟ್ಟು ಬೇರೇನೂ ಇಲ್ಲ ನಂಗೆ. ನಿಂಗೆ ಏನು ಬೇಕು ಅಂತ ನೀನೆ ಹೇಳ್ತಿಯ? ಈ ಮನಸು confuse ಆಗಿ ನಿನ್ನ ತಲೆ ಕೆಡಿಸೋ ಮುಂಚೆ ಹೇಳ್ತಿಯ ಪ್ಲೀಸ್? ಹಾಗಾದ್ರೆ appointment ತಗೊಂಡು ಬಿಡಲಾ ಇವತ್ತು ಸಂಜೆ?
Subscribe to:
Post Comments (Atom)
ನಿಮ್ಮ ಬಿಡಿ ಬಿಡಿ ಭಾವಗುಚ್ಛಗಳನ್ನ ಬಿಡುವಿನ ವೇಳೇಲಿ ಓದಿದ್ರೆ ಟೆನ್ಷನ್ನಿಗೆಲ್ಲ ಬಿಡುಗಡೆ.. :-)
ReplyDeleteನಿಮ್ಮ ಟೆನ್ಶನ್ ಕಡಿಮೆ ಆಗಿದ್ರೆ ನಮ್ಮ ಭಾಗ್ಯ. Thanks for visiting. ಹೀಗೆ ಬಂದು ನಿಮ್ಮ ಅನಿಸಿಕೆ ಹೇಳ್ತಾ ಇರಿ :)
ReplyDeletehi
ReplyDelete