ಮನಸಿನ ಬಿಳಿ ಹಾಳೆಯಲ್ಲಿ ನಿನ್ನದೇ ಚಿತ್ರ, ಕಣ್ಣು ತುಂಬಾ ನಿನ್ನದೇ ರೂಪ, ಆಡುವ ಪ್ರತಿ ಮಾತಿನಲ್ಲೂ ನಿನ್ನದೇ ಹೆಸರು, ಹಾಡುವ ಪ್ರತಿ ಹಾಡಿನಲ್ಲೂ ನಿನ್ನದೇ ಭಾವ, ಕಣ್ಣು ಮುಚ್ಚಿದರೆ ಕಾಡೋದು ನಿನ್ನದೇ ಕನಸು. ಕನಸಲ್ಲಿ ಬರೋ ಸೂರ್ಯನ ಹೊಂಬಣ್ಣ, ಜಡಿ ಮಳೆ, ಕಾಮನ ಬಿಲ್ಲು, ಕಾಲಿಗೆ ತಣ್ಣಗೆ ಸೋಕುವ ಬೆಳಗಿನ ಪುಟ್ಟ ಇಬ್ಬನಿ, ಪ್ರತಿ ಹೂವು, ಬಳ್ಳಿ, ಪ್ರತಿ ಬೀದಿ, ಗಲ್ಲಿ, ಅಡ್ಡ, ತಿರುವು, ಕೆರೆ, ನದಿ, ಕಾಲುವೆಯೂ ನೀನಿಲ್ಲದೆ ಖಾಲಿ ಖಾಲಿ. ಇಷ್ಟೊಂದು ಒಲವನ್ನು ಒಡಲಲ್ಲಿ ತುಂಬಿಕೊಂಡು ಹೇಳದೆ ಹೇಗಿರಲಿ? ಪ್ರತಿ ಕ್ಷಣವೂ ನಿನ್ನ ಇಲ್ಲದಿರುವಿಕೆಯಲ್ಲಿ ಬೇಸತ್ತಿದೆ. ದಿನ ಸೋಲುತ್ತಿದೆ ಚಲಿಸುವ ಉತ್ಸಾಹವಿಲ್ಲದೆ. ಇಳಿಸಂಜೆಯಲ್ಲಿ ಒಬ್ಬಂಟಿಯಾಗಿದ್ದೇನೆ. ನೀ ಇಲ್ಲದ ಮೌನವನ್ನು ಹೇಗೆ ಸವಿಯಲಿ? ಬರೆದಿರುವ ಪ್ರತಿ ಅಕ್ಷರವೂ ಪ್ರೆಶ್ನೆಯಾಗಿ ಕಾಡುತ್ತಿದೆ. ನಿನ್ನ ಸನಿಹವೇ ಅವಕ್ಕೆ ಉತ್ತರ.
Sunday, December 25, 2011
Friday, September 2, 2011
ಎಲ್ಲೆಂದರಲ್ಲಿ ವಿಶಾಲವಾಗಿ ಹರಡಿತ್ತು ಹಸಿರು. ತಲೆಯೆತ್ತಿ ನೋಡಿದರೆ ಬಾನೆಲ್ಲ ನೀಲಿ ನೀಲಿ. ತಿಳಿನೀರಿನಂತೆ ನಿರ್ಮಲ. ಅಲ್ಲಲ್ಲಿ ಬಾನಕ್ಕಿಗಳ ನಲಿವು. ಹಕ್ಕಿಗಳ ಪಿಸುಮಾತು. ತಂಪಾದ ಗಾಳಿ ಮೈದಡವಿ ಹಾಗೆ ಮುಂದಕ್ಕೆ ಸಾಗುತಿತ್ತು. ಅದಕ್ಕೆ ತಕ್ಕಂತೆ ಮರದ ಎಲೆಗಳು ನರ್ತಿಸಿದಂತೆ ಕಾಣುತಿತ್ತು. ಇಂತಹ ವಾತಾವರಣದಲ್ಲಿ ನೀನಿರದಿದ್ದರೆ ಮನಸು ಕೇಳುವುದೇ? ಅಲ್ಲಿ ನೀನು ಖಂಡಿತ ಇದ್ದೆ. ನನ್ನ ಅಂಗೈಯನ್ನು ನಿನ್ನ ಅಂಗೈಯಲ್ಲಿ ಹುದುಗಿಸಿಕೊಂಡಿದ್ದೆ. ನಿನ್ನ ಕೈ, ನನ್ನ ಪೂರ್ತಿ ಬದುಕಿಗೆ ಆಶ್ರಯ ಕೊಡುವಂತಿತ್ತು.
ಇವತ್ತಿನ ದಿನ ಎಲ್ಲ ದಿನಗಳಂತಲ್ಲ. ನಮ್ಮಿಬ್ಬರ ಜೀವನದ ಅತ್ಯಂತ ಖುಷಿಯ ಸಂದರ್ಭಕ್ಕೆ ಮೈಲಿಗಲ್ಲು ಇಡುವ ಈ ದಿನ ತುಂಬಾ ಅತ್ಯಮೂಲ್ಯವಾದುದು. ಹಿಂದೆ ತಿರುಗಿ ನೋಡಿದರೆ ನಾವಿಬ್ಬರು ನಡೆದು ಬಂದ ದಾರಿ. ಅಲ್ಲಿ ಅರಳಿದ್ದ ಹೂವುಗಳು ನಮ್ಮನ್ನು ನೋಡಿ ನಗೆ ಬೀರುತ್ತಿತ್ತು. ಅಲ್ಲೆಲ್ಲ ಬರಿ ನಗುವೇ ತುಂಬಿತ್ತು. ನಮ್ಮ ಬಗ್ಗೆ ನನಗೇ ಹೆಮ್ಮೆಯೆನಿಸಿತು. ಹೀಗೆ ಯಾವಾಗಲು ನಗುತ್ತಾ ಮುಂದುವರೆಯಲು ಉತ್ಸಾಹ ತುಂಬಿತ್ತು.
ನಮ್ಮ ಮುಂದೆ ಬಣ್ಣ ಬಣ್ಣದ ಅಸಂಖ್ಯಾತ ಕನಸುಗಳು. ಕನಸುಗಳು ಅಸಂಖ್ಯಾತವಾದರೂ ನಾವಿಬ್ಬರು ಕಾಣುವುದು ಒಂದೇ ರೀತಿಯ ಕನಸುಗಳು. ಗುರಿ ಒಂದೇ, ಪರಿ ಒಂದೇ. ಅವೆಲ್ಲವೂ ನಮಗಾಗಿ, ನಮ್ಮಖುಷಿಗಾಗಿ.
ಇಬ್ಬರೂ ಸೇರಿ ಇನ್ನೂ ಹೊಸ ಹೊಸ ಕನಸುಗಳಿಗೆ ಬಣ್ಣ ಹಚ್ಚೋಣ. ಬದುಕನ್ನು ರಂಗಾಗಿಸೋಣ. ನಮ್ಮ ಖುಷಿಯ ಹೊಸ ಹೊಸ ಮುಗ್ಧ ಕನಸುಗಳನ್ನೂ ಪೂರೈಸೋಣ. ಹೊಸ ಜೀವನದತ್ತ, ಹೊಸ ಕನಸಿನೆಡೆಗೆ ಜೊತೆಯಾಗಿ ಮುನ್ನಡೆಯೋಣ.
Wednesday, August 3, 2011
ನಿನ್ನೆದೆ ಬಡಿತ ಕೇಳೋಣವೆಂದು ನಿನ್ನ ಎದೆಗೆ ಒರಗಿದರೆ ಅಲ್ಲಿಯೇ ನಿದ್ದೆ ಹೊಗಿಬಿಟಿದ್ದೆ. ನಿನ್ನ ಆಶ್ರಯ ಅದೆಷ್ಟು ನೆಮ್ಮದಿ ಕೊಡುತ್ತೆ. ಯಾವುದೇ ನೋವಲ್ಲಿ ಮನಸು ಒದ್ದಾಡಿದರೂ, ಅದೆಷ್ಟು ಸಂಕಟವಾದರೂ, ನೋವಿಗೆ ಯಾರೇ ಕೂಡ ಕಾರಣವಾದರೂ ನಿನ್ನಲ್ಲಿ ಹೇಳ್ಕೊಳ್ಳಲಿಲ್ಲ ಅಂದ್ರೆ ಸಮಾಧಾನ ಸಾಧ್ಯವೇ ಇಲ್ಲ. ನಿನ್ನ ಮಾತುಗಳು ನೋವನ್ನೆಲ್ಲ ಅಳಿಸಿ ನೆಮ್ಮದಿ ತುಂಬುತ್ತೆ. ನೀನು ಮೊದಲೇ ಯಾಕೆ ಸಿಗಲಿಲ್ಲ, ನೀನು ಸಿಕ್ಕಿದ ಮೇಲೆ ಯಾಕೆ ನನ್ನಿಂದ ಇಷ್ಟು ದಿನ ದೂರವಾಗಿದ್ದೆ ಅಂತ ಮನಸು ಹುಸಿ ಮುನಿಸು ತೋರಿಸ್ತಿದೆ. ನೀನು ಬಂದ ಮೇಲೆಯೇ ನನ್ನ ಜೀವನಕ್ಕೆ ಜೀವ ಬಂದದ್ದು. ನನ್ನ ಪ್ರತೀ ನೋವಿಗೂ, ಪ್ರತೀ ಕಷ್ಟಕ್ಕೂ, ಹೆಗಲು ಕೊಡುತ್ತಿಯಲ್ಲ? ನನ್ನ ಪ್ರತೀ ಭಾವನೆಗಳನ್ನ ಅರ್ಥ ಮಾಡ್ಕೋತಿಯಲ್ಲ? ನನ್ನನ್ನು ಹೀಗೆ ಇಷ್ಟೊಂದು ಇಷ್ಟ ಪಡುವ ನಿನಗೆ ನಾನು ಚಿರಋಣಿ. ನಿನ್ನ ಹೆಗಲಿಗೆ ಒರಗಿದ ಮೇಲೆ ನನಗೆ ಇನ್ನೇನು ಚಿಂತೆ. ಇನ್ನೆಲ್ಲ ಖುಷಿಯ ವಿಷಯಗಳೇ ತಾನೆ? ಆ ದೇವರಲ್ಲಿ ನನ್ನದೊಂದೇ ಪ್ರಾರ್ಥನೆ. ನಮ್ಮ ಈ ಪ್ರೀತಿಯ ಮೇಲೆ ಯಾರ ದೃಷ್ಟಿಯೂ ಬೀಳದಿರಲಿ ದೇವರೇ ಅಂತ.
Thursday, September 30, 2010
ಕನಸು
ಅದು ನಿನ್ನ ಸ್ಪರ್ಶವೆಂದೇ ಅನಿಸಿದ ಸ್ಪರ್ಶ. ನಿದ್ದೆಯಲಿ ನಿನ್ನೆಡೆಗೆ ಕೈ ಚಾಚಿದಾಗ ನನ್ನ ಕೈ ಬೆರಳುಗಳನ್ನು ನೇವರಿಸಿದ ಸ್ಪರ್ಶ. ನಿದ್ದೆಯಿಂದ ಎಚ್ಚರಾಗಿ ನಿನ್ನೆಡೆಗೆ ತಿರುಗಿದಾಗ ಅದೇ ನಿದ್ದೆಯಲಿ ನೀನು ಮೈ ಮರೆತಿದ್ದೆ. ಹಾಗಾದರೆ ಕನಸಲ್ಲಾ ನೀ ನನ್ನ ಸ್ಪರ್ಶಿಸಿದ್ದು? ನನ್ನನ್ನ ಒಬ್ಬಳೇ ಬಿಟ್ಟು ಕನಸು ಕಾಣುತ್ತಿಯ? ಸ್ವಲ್ಪ ಇರು. ನಾನು ಕೂಡ ಬರುತ್ತೀನಿ. ಜೊತೆಯಲ್ಲೇ ಕನಸಲ್ಲಿ ಮೈಮರೆಯೋಣ. ಕನಸಿಂದ ನನ್ನ ಎಚ್ಚರಿಸದೆ ಮತ್ತೆ ಮತ್ತೆ ನನ್ನ ಕೈ ನೇವರಿಸಿ ಚುಂಬಿಸು. ನಕ್ಷತ್ರಗಳ ನಡುವೆ ಚಂದಿರನಾಗಿ ಬಾ.
ನಿನ್ನವಳು.
Tuesday, July 27, 2010
ನಿನ್ನ ಹೆಸರಿನ ಎಸಳು..
ಯಾಕೋ uneasy feeling ಕಾಡ್ತಾ ಇದೆ. ಮಾಡೋದಕ್ಕೆ ಕೆಲಸ ಇದ್ರುನು ಮಾಡಕ್ಕಾಗ್ತಿಲ್ಲ. ಒಂದ್ಸಲ ನಿನ್ನನ್ನ ನೋಡಿದ್ರೆ ಸರಿ ಹೋಗಬಹುದು ಅನ್ನಿಸ್ತಿದೆ. ಮನಸು ನಿನ್ ಮೇಲೆ ಎಷ್ಟು depend ಆಗಿದೆ ಅಲ್ವ. ಎಲ್ಲರೂ ಕೇಳ್ತಾರೆ ಯಾಕೆ ನಿನ್ನ ಬಗ್ಗೆ ಮಾತ್ರ ಬರಿತೀಯ ಅಂತ. ಸುಮ್ನೆ smile ಮಾಡೋದು ಬಿಟ್ರೆ ಬೇರೆ ಏನೂ ಹೇಳಕ್ಕಾಗಲ್ಲ. ಮೊದಲೆಲ್ಲ ಬರೀಬೇಕು ಅನ್ನಿಸಿದಾಗ ಮನಸ್ಸಿಗೆ ಬರೋ ವಿಷಯಗಳನ್ನ ಗೀಚುತ್ತಿದ್ದೆ. ಈಗ ನೀನಿಲ್ಲದ ವಿಷಯಗಳೇ ನಂಗೊತ್ತಿಲ್ಲ ಅನ್ಸುತ್ತೆ. ಮನಸ್ಸಿಗೆ ಬರೋದು ನೀನು ಮಾತ್ರ. ಆದ್ರೂನು ಒಂದೊಂದ್ಸಲ ಯೋಚನೆ ಮಾಡ್ತೀನಿ ನೀನಿಲ್ಲದ ವಿಷಯಗಳ ಬಗ್ಗೆ. ದೇವರಿಲ್ಲದ ಜಾಗ ಹುಡುಕಲು ಹೊರಟವನ ರೀತಿ ಆಗುತ್ತೆ ನನ್ನ ಪರಿಸ್ಥಿತಿ. ಕೆಲವೊಮ್ಮೆ ನೀನು ಮಾತಾಡ್ತಾ ಇರಬೇಕು, ನೀ ಹೇಳಿದ ಪ್ರತಿ ಅಕ್ಷರವನ್ನು ನೀ ಹೇಳಿದ ರೀತಿಯಲ್ಲೇ ನಾನು ಬರಿತಾ ಇರಬೇಕು ಅನ್ಸುತ್ತೆ. ನೀನು ಬರೋ ಮುಂಚೆ ಕೂಡ ನೀನು ಇರಲಿಲ್ಲ ಅಂತ ಕೂಡ ಈಗ ಅನ್ನಿಸ್ತಿಲ್ಲ. ಪ್ರತಿ ಇಲ್ಲಗಳಲ್ಲಿ ನೀನಿದಿಯ, ನಿನ್ನ ನೋಡೋ ಹಂಬಲ ಇದೆ. ನಂಗೊತ್ತು, ಈಗಲೇ ನಿನ್ನ ನೋಡ್ಬೇಕು ಅಂದ ತಕ್ಷಣ computer lock ಮಾಡಿ ಹೊರಡ್ತಿಯ ಅಂತ. ಆದ್ರೆ ಇವತ್ತು ನೋಡ್ಬೇಕು, ನಿನ್ನ ನೋಡೋ ಹಂಬಲ ಸಂಜೆ ತನಕ ಎಷ್ಟು ಉತ್ಕಟವಾಗುತ್ತೆ ಅಂತ. ಅಲ್ಲಿ ತನಕ ನೀ ಕೊಟ್ಟ ನೆನಪಿನ ಹೂಗಳ ಎಸಳುಗಳನ್ನು ಬಿಡಿಸಿ, ಪ್ರತಿ ಎಸಳಿನಲ್ಲಿ ನಿನ್ನ ಹೆಸರು ಬರಿತಾ ಇರ್ತೀನಿ.
Tuesday, June 22, 2010
ಕನಸಲಿ ಸಿಗಲೇ?
ಈ ನಿಶಬ್ಧ ರಾತ್ರಿಯಲ್ಲಿ ಸಶಬ್ಧವಾಗಿ ನಿದ್ರಿಸಿ ಕನಸು ಕಾಣುತ್ತಿರುವ ಹುಡುಗ,
ಇವತ್ತು ಯಾರ ಕನಸು ಕಾಣುತ್ತ ಇದ್ದೀಯ? ಅಕ್ಕ ಪಕ್ಕದಲ್ಲಿ ಎಲ್ಲಿಯಾದರೂ ನಾನು ಇದಿನಾ? ನನ್ನ ಬಿಟ್ಟು ಒಬ್ಬನೇ ಕನಸು ಕಾಣಬೇಡ ಪ್ಲೀಸ್. ನನ್ನನ್ನು ಒಮ್ಮೆ ಕರೆ. ಅಯ್ಯೋ, ದಿನ ಪೂರ್ತಿ ಕಾಟ ತಡೆಯೋದೆ ಕಷ್ಟ, ಇನ್ನು ಕನಸಲ್ಲಿ ಬೇರೆ ಕರಿಬೇಕಾ ಅಂತ ಅಂದ್ಕೋತ ಇದ್ದೀಯ? ನೀನು ಪ್ರತಿ ಸಲ ನಿನ್ನ ಕನಸಿನ ಬಗ್ಗೆ ಹೇಳಿದಾಗ ಅಲ್ಲಿ ನಾನು ಕೂಡ ಇದಿನಾ ಅಂತ ಯೋಚನೆ ಮಾಡ್ತಾ ಇರುತ್ತೆ ಮನಸು. ಇನ್ನು ನಾನೇನು ಮಾಡ್ಲಿ? ಭಾವನೆಗಳನ್ನ ಕಂಟ್ರೋಲ್ ಮಾಡೋದನ್ನ ನಂಗೆ ಯಾರೂ ಕಲಿಸಲಿಲ್ಲ. ತಿಂಗಳ ಬೆಳಕಲ್ಲಿ ಕಾಣಿಸುತ್ತ ಇರೋ ನಿನ್ನ ಮುಖನ ನೋಡ್ತಾ ಇದ್ರೆ, ಹೇಳ್ದೆ ಕೇಳ್ದೆ ಹಾಗೆ ನುಗ್ಗಿ ನಿನ್ನ ಕನಸಲ್ಲ್ಲಿ ತೂರಿಕೊಳ್ಳೋಣ ಅನ್ಸುತ್ತೆ. ನೀನೇನು ಬೇಜಾರು ಮಾಡ್ಕೊಳಲ್ಲ ಅಂತ ಕೂಡ ನನ್ಗೊತು. ಅದ್ಕೆ ನೀನು ಅಂದ್ರೆ ಅಷ್ಟು ಸಲಿಗೆ. ಆದ್ರೆ promise ಮಾಡ್ತೀನಿ, ಕನಸಲ್ಲಿ ಬಂದು, ನಿಂಗೆ ಬೋರ್ ಆಗ್ತಾ ಇದ್ಯಾ, ಬೇಜಾರಾಗ್ತಾ ಇದ್ಯಾ, ನನ್ನ ಮೇಲೆ ಕೋಪಾನ, ಅಂತ ಸಿಲ್ಲಿ questions ಎಲ್ಲ ಕೇಳಲ್ಲ ಆಯ್ತಾ.
ಮತ್ತೆ, ಕನಸಲ್ಲಿ ಬಂದ ಮೇಲೆ ನನ್ನ ಹಳೆ ರಾಗ, ಕಾಲು ನೋವು, ಕೈ ನೋವು, ತಲೆ ನೋವು ಅಂತ ಹೇಳಿ ನಿಂಗೆ ಕೆಲಸ ಕೊಡಲ್ಲ. ನಿಂಗೆ ತಲೆ ಇದೆ ಅಂತ prove ಆಯಿತು ಅಂತ remind ಮಾಡೋಕ್ಕೆ ಆಸ್ಪದ ಕೊಡೋದೇ ಇಲ್ಲ :) ಕನಸಲ್ಲಿ ಬಂದು ಅದೇ ಹಳೆ ಲುಕ್ ಕೊಟ್ಟು ನನ್ನ ಗುರಾಯಿಸ್ತಾ ಇರ್ತಾಳೆ ಅಂತನೂ ಅಂದ್ಕೋಬೇಡ. ಪ್ರತಿ ದಿನ ಆ ಲುಕ್ ತಗೊಂಡು ನೀನು ಬೋರ್ ಆಗಿ ಹೋಗಿದಿಯ ಅಂತ ನಂಗೊತ್ತು :) ಇಷ್ಟೆಲ್ಲಾ ಹೇಳಿದ ಮೇಲೆ ನನ್ನನ್ನ ನಿನ್ನ ಕನಸಲ್ಲಿ ಕರೆದುಕೊಳ್ತಿಯಲ್ವ? ಹೇಳಿದ ಮಾತಿಗೆ ತಪ್ಪಿದರೆ next time ಕರ್ಕೊಳೋದು ಬೇಡ :)
ಈ ತರ ತಲೆ ತಿನ್ನೋದು ಬಿಟ್ಟು ಇವ್ಳು ಕನಸಲ್ಲ್ಲಿ ಬಂದು ಇನ್ನೇನು ಮಾಡಬಹುದು ಅಂತ ತಲೆ ಕೆಡಿಸಿಕೊಳ್ತಾ ಇದ್ದೀಯ? ನಿನ್ನ ಕನಸಲ್ಲಿ ನಾನು ಬರ್ತಿರೋದು ನಿನ್ನ ಮಾತು ಕೇಳೋಕೆ. ಇವತ್ತು ಮಾತ್ರ ನಂಗೆ ಏನೂ excuse ಕೊಡೊ ಹಾಗಿಲ್ಲ. ಇವತ್ತು ನೀನು ನಂಜೊತೆ ಮಾತಾಡೋಕೆ ಕೂತ್ಕೊಳ್ಳೆ ಬೇಕು. ಮನಸು ಹಗುರ ಆಗೋ ತನಕ..
ನಿನ್ನ ಮಾತು ಕೇಳೋಕೆ ಬರ್ತೀನಿ. ನೀನು ಮಾತಾಡ್ತಿಯ ಅನ್ನೋ ಆಸೆಯಿಂದ.

Monday, June 21, 2010
ನಾನಿಲ್ಲವೇ...
ಸುಮ್ಮನೆ ಬೇಸರವೇ,
ಹೇಳಲಾಗದ ಗೊಂದಲವೇ,
ತಳಮಳ ಮರೆತು ನಗು ಒಮ್ಮೆ
ನಿನ್ನೊಡನೆ ನಾನಿಲ್ಲವೇ?
ಜಗದ ವಿಕೃತಿ ಬರದಿರಲಿ
ನಿನ್ನ ಮೃದು ಮನಸಿನೆದುರು,
ಅವೆಲ್ಲವೂ ನನಗಿರಲಿ,
ಸಂತೋಷವೊಂದೆ ನಿನಗಿರಲಿ
ನಿನ್ನ ಮುಗ್ಧ ನಗುವಿನೆದುರು ದುಃಖವೂ ಒಂದು ಲೆಕ್ಕವೇ?
ಹೇಳು ಗೆಳೆಯ, ನಿನ್ನೊಡನೆ ನಾನಿಲ್ಲವೇ?
ಚೈತನ್ಯವಿರಲಿ ನಿನ್ನ ಪ್ರತಿ ಕ್ಷಣದಲಿ,
ಬೇಸರದ ಎಳೆಯೂ ಸಹ ಅಲ್ಲಿ ಸುಳಿಯದಿರಲಿ,
ಕೈಹಿಡಿದ ನಮ್ಮ ಕೈಗಳು ಇನ್ನೂ ಬಿಗಿಯಾಗಲಿ,
ಹೊಸ ಹಾದಿಯಲಿ ಹೂವುಗಳು ನಲಿಯಲಿ,
ಹೊಸ ಜೀವ ಅರಳಲಿ,
ಇನ್ನು ಚಿಂತೆಯೇಕೆ ಗೆಳೆಯ,
ನಿನ್ನಲ್ಲಿ ನಾನಿಲ್ಲವೇ?
ನಾನೇ ನಿನಗಲ್ಲವೇ?
Subscribe to:
Posts (Atom)