Tuesday, July 27, 2010
ನಿನ್ನ ಹೆಸರಿನ ಎಸಳು..
ಯಾಕೋ uneasy feeling ಕಾಡ್ತಾ ಇದೆ. ಮಾಡೋದಕ್ಕೆ ಕೆಲಸ ಇದ್ರುನು ಮಾಡಕ್ಕಾಗ್ತಿಲ್ಲ. ಒಂದ್ಸಲ ನಿನ್ನನ್ನ ನೋಡಿದ್ರೆ ಸರಿ ಹೋಗಬಹುದು ಅನ್ನಿಸ್ತಿದೆ. ಮನಸು ನಿನ್ ಮೇಲೆ ಎಷ್ಟು depend ಆಗಿದೆ ಅಲ್ವ. ಎಲ್ಲರೂ ಕೇಳ್ತಾರೆ ಯಾಕೆ ನಿನ್ನ ಬಗ್ಗೆ ಮಾತ್ರ ಬರಿತೀಯ ಅಂತ. ಸುಮ್ನೆ smile ಮಾಡೋದು ಬಿಟ್ರೆ ಬೇರೆ ಏನೂ ಹೇಳಕ್ಕಾಗಲ್ಲ. ಮೊದಲೆಲ್ಲ ಬರೀಬೇಕು ಅನ್ನಿಸಿದಾಗ ಮನಸ್ಸಿಗೆ ಬರೋ ವಿಷಯಗಳನ್ನ ಗೀಚುತ್ತಿದ್ದೆ. ಈಗ ನೀನಿಲ್ಲದ ವಿಷಯಗಳೇ ನಂಗೊತ್ತಿಲ್ಲ ಅನ್ಸುತ್ತೆ. ಮನಸ್ಸಿಗೆ ಬರೋದು ನೀನು ಮಾತ್ರ. ಆದ್ರೂನು ಒಂದೊಂದ್ಸಲ ಯೋಚನೆ ಮಾಡ್ತೀನಿ ನೀನಿಲ್ಲದ ವಿಷಯಗಳ ಬಗ್ಗೆ. ದೇವರಿಲ್ಲದ ಜಾಗ ಹುಡುಕಲು ಹೊರಟವನ ರೀತಿ ಆಗುತ್ತೆ ನನ್ನ ಪರಿಸ್ಥಿತಿ. ಕೆಲವೊಮ್ಮೆ ನೀನು ಮಾತಾಡ್ತಾ ಇರಬೇಕು, ನೀ ಹೇಳಿದ ಪ್ರತಿ ಅಕ್ಷರವನ್ನು ನೀ ಹೇಳಿದ ರೀತಿಯಲ್ಲೇ ನಾನು ಬರಿತಾ ಇರಬೇಕು ಅನ್ಸುತ್ತೆ. ನೀನು ಬರೋ ಮುಂಚೆ ಕೂಡ ನೀನು ಇರಲಿಲ್ಲ ಅಂತ ಕೂಡ ಈಗ ಅನ್ನಿಸ್ತಿಲ್ಲ. ಪ್ರತಿ ಇಲ್ಲಗಳಲ್ಲಿ ನೀನಿದಿಯ, ನಿನ್ನ ನೋಡೋ ಹಂಬಲ ಇದೆ. ನಂಗೊತ್ತು, ಈಗಲೇ ನಿನ್ನ ನೋಡ್ಬೇಕು ಅಂದ ತಕ್ಷಣ computer lock ಮಾಡಿ ಹೊರಡ್ತಿಯ ಅಂತ. ಆದ್ರೆ ಇವತ್ತು ನೋಡ್ಬೇಕು, ನಿನ್ನ ನೋಡೋ ಹಂಬಲ ಸಂಜೆ ತನಕ ಎಷ್ಟು ಉತ್ಕಟವಾಗುತ್ತೆ ಅಂತ. ಅಲ್ಲಿ ತನಕ ನೀ ಕೊಟ್ಟ ನೆನಪಿನ ಹೂಗಳ ಎಸಳುಗಳನ್ನು ಬಿಡಿಸಿ, ಪ್ರತಿ ಎಸಳಿನಲ್ಲಿ ನಿನ್ನ ಹೆಸರು ಬರಿತಾ ಇರ್ತೀನಿ.
Tuesday, June 22, 2010
ಕನಸಲಿ ಸಿಗಲೇ?
ಈ ನಿಶಬ್ಧ ರಾತ್ರಿಯಲ್ಲಿ ಸಶಬ್ಧವಾಗಿ ನಿದ್ರಿಸಿ ಕನಸು ಕಾಣುತ್ತಿರುವ ಹುಡುಗ,
ಇವತ್ತು ಯಾರ ಕನಸು ಕಾಣುತ್ತ ಇದ್ದೀಯ? ಅಕ್ಕ ಪಕ್ಕದಲ್ಲಿ ಎಲ್ಲಿಯಾದರೂ ನಾನು ಇದಿನಾ? ನನ್ನ ಬಿಟ್ಟು ಒಬ್ಬನೇ ಕನಸು ಕಾಣಬೇಡ ಪ್ಲೀಸ್. ನನ್ನನ್ನು ಒಮ್ಮೆ ಕರೆ. ಅಯ್ಯೋ, ದಿನ ಪೂರ್ತಿ ಕಾಟ ತಡೆಯೋದೆ ಕಷ್ಟ, ಇನ್ನು ಕನಸಲ್ಲಿ ಬೇರೆ ಕರಿಬೇಕಾ ಅಂತ ಅಂದ್ಕೋತ ಇದ್ದೀಯ? ನೀನು ಪ್ರತಿ ಸಲ ನಿನ್ನ ಕನಸಿನ ಬಗ್ಗೆ ಹೇಳಿದಾಗ ಅಲ್ಲಿ ನಾನು ಕೂಡ ಇದಿನಾ ಅಂತ ಯೋಚನೆ ಮಾಡ್ತಾ ಇರುತ್ತೆ ಮನಸು. ಇನ್ನು ನಾನೇನು ಮಾಡ್ಲಿ? ಭಾವನೆಗಳನ್ನ ಕಂಟ್ರೋಲ್ ಮಾಡೋದನ್ನ ನಂಗೆ ಯಾರೂ ಕಲಿಸಲಿಲ್ಲ. ತಿಂಗಳ ಬೆಳಕಲ್ಲಿ ಕಾಣಿಸುತ್ತ ಇರೋ ನಿನ್ನ ಮುಖನ ನೋಡ್ತಾ ಇದ್ರೆ, ಹೇಳ್ದೆ ಕೇಳ್ದೆ ಹಾಗೆ ನುಗ್ಗಿ ನಿನ್ನ ಕನಸಲ್ಲ್ಲಿ ತೂರಿಕೊಳ್ಳೋಣ ಅನ್ಸುತ್ತೆ. ನೀನೇನು ಬೇಜಾರು ಮಾಡ್ಕೊಳಲ್ಲ ಅಂತ ಕೂಡ ನನ್ಗೊತು. ಅದ್ಕೆ ನೀನು ಅಂದ್ರೆ ಅಷ್ಟು ಸಲಿಗೆ. ಆದ್ರೆ promise ಮಾಡ್ತೀನಿ, ಕನಸಲ್ಲಿ ಬಂದು, ನಿಂಗೆ ಬೋರ್ ಆಗ್ತಾ ಇದ್ಯಾ, ಬೇಜಾರಾಗ್ತಾ ಇದ್ಯಾ, ನನ್ನ ಮೇಲೆ ಕೋಪಾನ, ಅಂತ ಸಿಲ್ಲಿ questions ಎಲ್ಲ ಕೇಳಲ್ಲ ಆಯ್ತಾ.
ಮತ್ತೆ, ಕನಸಲ್ಲಿ ಬಂದ ಮೇಲೆ ನನ್ನ ಹಳೆ ರಾಗ, ಕಾಲು ನೋವು, ಕೈ ನೋವು, ತಲೆ ನೋವು ಅಂತ ಹೇಳಿ ನಿಂಗೆ ಕೆಲಸ ಕೊಡಲ್ಲ. ನಿಂಗೆ ತಲೆ ಇದೆ ಅಂತ prove ಆಯಿತು ಅಂತ remind ಮಾಡೋಕ್ಕೆ ಆಸ್ಪದ ಕೊಡೋದೇ ಇಲ್ಲ :) ಕನಸಲ್ಲಿ ಬಂದು ಅದೇ ಹಳೆ ಲುಕ್ ಕೊಟ್ಟು ನನ್ನ ಗುರಾಯಿಸ್ತಾ ಇರ್ತಾಳೆ ಅಂತನೂ ಅಂದ್ಕೋಬೇಡ. ಪ್ರತಿ ದಿನ ಆ ಲುಕ್ ತಗೊಂಡು ನೀನು ಬೋರ್ ಆಗಿ ಹೋಗಿದಿಯ ಅಂತ ನಂಗೊತ್ತು :) ಇಷ್ಟೆಲ್ಲಾ ಹೇಳಿದ ಮೇಲೆ ನನ್ನನ್ನ ನಿನ್ನ ಕನಸಲ್ಲಿ ಕರೆದುಕೊಳ್ತಿಯಲ್ವ? ಹೇಳಿದ ಮಾತಿಗೆ ತಪ್ಪಿದರೆ next time ಕರ್ಕೊಳೋದು ಬೇಡ :)
ಈ ತರ ತಲೆ ತಿನ್ನೋದು ಬಿಟ್ಟು ಇವ್ಳು ಕನಸಲ್ಲ್ಲಿ ಬಂದು ಇನ್ನೇನು ಮಾಡಬಹುದು ಅಂತ ತಲೆ ಕೆಡಿಸಿಕೊಳ್ತಾ ಇದ್ದೀಯ? ನಿನ್ನ ಕನಸಲ್ಲಿ ನಾನು ಬರ್ತಿರೋದು ನಿನ್ನ ಮಾತು ಕೇಳೋಕೆ. ಇವತ್ತು ಮಾತ್ರ ನಂಗೆ ಏನೂ excuse ಕೊಡೊ ಹಾಗಿಲ್ಲ. ಇವತ್ತು ನೀನು ನಂಜೊತೆ ಮಾತಾಡೋಕೆ ಕೂತ್ಕೊಳ್ಳೆ ಬೇಕು. ಮನಸು ಹಗುರ ಆಗೋ ತನಕ..
ನಿನ್ನ ಮಾತು ಕೇಳೋಕೆ ಬರ್ತೀನಿ. ನೀನು ಮಾತಾಡ್ತಿಯ ಅನ್ನೋ ಆಸೆಯಿಂದ.

Monday, June 21, 2010
ನಾನಿಲ್ಲವೇ...
ಸುಮ್ಮನೆ ಬೇಸರವೇ,
ಹೇಳಲಾಗದ ಗೊಂದಲವೇ,
ತಳಮಳ ಮರೆತು ನಗು ಒಮ್ಮೆ
ನಿನ್ನೊಡನೆ ನಾನಿಲ್ಲವೇ?
ಜಗದ ವಿಕೃತಿ ಬರದಿರಲಿ
ನಿನ್ನ ಮೃದು ಮನಸಿನೆದುರು,
ಅವೆಲ್ಲವೂ ನನಗಿರಲಿ,
ಸಂತೋಷವೊಂದೆ ನಿನಗಿರಲಿ
ನಿನ್ನ ಮುಗ್ಧ ನಗುವಿನೆದುರು ದುಃಖವೂ ಒಂದು ಲೆಕ್ಕವೇ?
ಹೇಳು ಗೆಳೆಯ, ನಿನ್ನೊಡನೆ ನಾನಿಲ್ಲವೇ?
ಚೈತನ್ಯವಿರಲಿ ನಿನ್ನ ಪ್ರತಿ ಕ್ಷಣದಲಿ,
ಬೇಸರದ ಎಳೆಯೂ ಸಹ ಅಲ್ಲಿ ಸುಳಿಯದಿರಲಿ,
ಕೈಹಿಡಿದ ನಮ್ಮ ಕೈಗಳು ಇನ್ನೂ ಬಿಗಿಯಾಗಲಿ,
ಹೊಸ ಹಾದಿಯಲಿ ಹೂವುಗಳು ನಲಿಯಲಿ,
ಹೊಸ ಜೀವ ಅರಳಲಿ,
ಇನ್ನು ಚಿಂತೆಯೇಕೆ ಗೆಳೆಯ,
ನಿನ್ನಲ್ಲಿ ನಾನಿಲ್ಲವೇ?
ನಾನೇ ನಿನಗಲ್ಲವೇ?
Tuesday, June 8, 2010
ನೆನಪಿನ ಅಲೆ

ಹಾಗೆ ಅಲೆಗಳನ್ನು ದಿಟ್ಟಿಸುತ್ತಿದ್ದಂತೆ ಪ್ರಕೃತಿಯೂ ಕೂಡ ಯಾಂತ್ರಿಕವಾದಂತೆ ಕಾಣಿಸಿತು. ಸಾಗರವು ಅಲೆಗಳನ್ನು ತಯಾರಿಸುವ ಒಂದು ಯಂತ್ರದಂತೆ ಅನಿಸಿತು. ಯಾಕೋ ಸರಿ ಕಾಣಲಿಲ್ಲ. ಮೇಲೆದ್ದೆ. ಕೆಂಪಾದ ಸೂರ್ಯ ಇನ್ನೇನು ಮುಳುಗುವವನಿದ್ದ. ಸಾಗರದ ನೀರ ಮೇಲೆಲ್ಲಾ ಯಾರೋ ಕೆಂಪು ಬಣ್ಣ ಚಿಮುಕಿಸಿದಂತೆ ಕಾಣಿಸಿತು. ಪ್ರಕೃತಿಯನ್ನು ಯಂತ್ರಕ್ಕೆ ಹೋಲಿಸಿದ ನನ್ನ ಬಗ್ಗೆ ನನಗೇ ಬೇಜಾರಾಯ್ತು. ಹಾಗೆ ಮರಳು ಹಾಸಿದ ನೆಲದಲ್ಲಿ ಪಾದವೂರಿಸಿ ಮತ್ತೆ ಹಿಂದಕ್ಕೆ ತಿರುಗಿ ನನ್ನ ಹೆಜ್ಜೆಗುರುತುಗಳನ್ನು ನೋಡುತ್ತಾ ನಡೆದೆ. ಮನಸು ಅಲೆಗಳ ಜೊತೆ ಉತ್ಸಾಹದಿಂದ ಕುಣಿಯುತಿತ್ತು.
Wednesday, June 2, 2010
ಬೆಳಗಿನ ಸಮಾಚಾರ
ಅದೊಂತರಾ ನಗು. ರಸ್ತೆಯ ಬದಿಯಲ್ಲಿ ಇನ್ನೇನು ಮರೆಯಾಗ್ಬೇಕು ಅನ್ನೋವಷ್ಟರಲ್ಲಿ ನನ್ನ ಕಡೆ ಒಂದ್ಸಲ ತಿರುಗಿ ನೋಡ್ತಿಯಲ್ಲ, ಅದನ್ನ ನೋಡಿ ನನಗೇ ಬರೋ ಮುಗುಳ್ನಗು. ನಿನ್ನ ತಯಾರಿ ಮುಗಿದ ಮೇಲೆ ಇನ್ನು ನನ್ನ ತಯಾರಿ ಶುರು ಮಾಡುವುದು ಈ ಮುಗುಳ್ನಗು. ಎರಡು ತಯಾರಿಗಳ ನಡುವೆ ಬರೋ ಈ break ನಂಗೆ ತುಂಬ ಇಷ್ಟವಾದ ಸಮಯ. ಮರೆಯಾಗುವ ತನಕ ನಿನ್ನ ನೋಡ್ತಾ ಬಾಲ್ಕನಿಲಿ ಕೂತಿದ್ರೆನೆ ಸಮಾಧಾನ. ಮನಸು ಮಲ್ಲಿಗೆಯಷ್ಟು ಹಗುರ(ಕುಂದಾಪುರದ ಹಗುರ ಅಲ್ಲ :)). ಇಲ್ಲವಾದರೆ ಆ ಅಮೂಲ್ಯ ಮುಗುಳುನಗುವಿನ ಸೌಭಾಗ್ಯ ನನಗೆ ಸಿಗುವುದೇ?

ಸಮಾಚಾರ್ ಸಮಾಪ್ತ್. ಸಂಜೆ ಸಿಗೋಣ :)
Tuesday, June 1, 2010
ಸುಮ್ಮನೆ..
ಇಷ್ಟೊತ್ತು ನಿನ್ನ photo ನೋಡ್ತಾ ಇದ್ದೆ. ಬ್ಲಾಗ್ನಲ್ಲಿ ನಾವಿಬ್ರು ಕೈ ಹಿಡ್ಕೊಂಡಿರೋ ಫೋಟೋ. ನಿನ್ನ ಕೈಯಲ್ಲಿ ಎಷ್ಟು ಪ್ರೀತಿ ಇದೆ ಅಂತ ಹುಡುಕುತ್ತಾ ಇದ್ದೆ. ನಿನ್ನ ಕೈಯಲ್ಲಿ ನಿನ್ನ ಮನಸನ್ನು ಓದ್ತಾ ಇದ್ದೆ. ಅದರ ಪಕ್ಕದಲ್ಲೇ ಬರೆದಿದೀನಿ "ಅನೂಹ್ಯ" ಅಂತ. ಬ್ಲಾಗ್ ಗೆ ಇಟ್ಟಿರೋ ಹೆಸರು ಅದು. ಈಗ ಅನ್ನಿಸ್ತ ಇತ್ತು, ಫೋಟೋಗೆ ಇಟ್ಟಿರೋ ಹೆಸರಾ ಅಂತ. ನೀನು ನನ್ನ ಕೈ ಹಿಡಿತೀಯ ಅಂತ ದೇವರು ನಂಗೆ ಯಾವ ಸೂಚನೆ ಕೂಡ ಕೊಟ್ಟಿರಲಿಲ್ಲ. ನಿನಗೂ ಕೂಡ ಕೊಟ್ಟಿರಲಿಲ್ಲ ಅಲ್ವ. ಇದನ್ನ ದೇವರು ಮೊದಲೇ ತೀರ್ಮಾನ ಮಾಡಿದ್ರ ಅಥವಾ sudden decision ತಗೊಂಡ್ರ ಅಂತ ಗೊತ್ತಾಗ್ಲಿಲ್ಲ. ಆದ್ರೆ ನೀನು ನಂಗೆ ಸಿಕ್ಕಿದಿಯ. ಇದಕ್ಕೆ ಪ್ರತಿಯಾಗಿ ನಿಂಗೆ ನಾನು ಏನು ಕೊಡಲಿ? ನಿಂಗೆ ಕೊಡೋವಷ್ಟು worth gift ನನ್ನ ಹತ್ರ ಇದೆಯಾ? ನನ್ನ ಹತ್ರ ಇರೋದು ಬರಿ silly things . ಈ silly things ಎಲ್ಲ ನಂಗೆ ಇರಲಿ. ನಿನಗೋಸ್ಕರ ಏನು ಕೊಡಲಿ? ಇದು ಎಷ್ಟೋ ದಿನದಿಂದ ಕಾಡ್ತಾ ಇರೋ ಪ್ರೆಶ್ನೆ. ನನ್ನಿಂದ ಉತ್ತರ ಸಿಗೋ ನಂಬಿಕೆ ಇಲ್ಲ. ಯಾಕೆ ಅಂದ್ರೆ ನಿಂಗೆ ಕೊಡೋಕ್ಕೆ ಆಗೋವಷ್ಟು precious gift ಈ silly ತಲೆಗೆ ಹೇಗೆ ಹೊಳಿಯುತ್ತೆ? ನಿನ್ನ ಪ್ರೀತ್ಸೋದೊಂದೇ ಗೊತ್ತಿರೋದು ನಂಗೆ. ನಿನ್ನ ಪ್ರೀತ್ಸೋದು ಬಿಟ್ಟು ಬೇರೇನೂ ಇಲ್ಲ ನಂಗೆ. ನಿಂಗೆ ಏನು ಬೇಕು ಅಂತ ನೀನೆ ಹೇಳ್ತಿಯ? ಈ ಮನಸು confuse ಆಗಿ ನಿನ್ನ ತಲೆ ಕೆಡಿಸೋ ಮುಂಚೆ ಹೇಳ್ತಿಯ ಪ್ಲೀಸ್? ಹಾಗಾದ್ರೆ appointment ತಗೊಂಡು ಬಿಡಲಾ ಇವತ್ತು ಸಂಜೆ?
ಹೇಳು..

ಇಲ್ಲೆಲ್ಲೂ ನನ್ನ ಅಸ್ತಿತ್ವವಿಲ್ಲ. ನನ್ನೋಳಗಿರುವುದು ನೀನಷ್ಟೇ, ನಾನಲ್ಲ. ನನ್ನನ್ನು ಎಲ್ಲಿ ಕಳೆದುಕೊಂಡೆ ಎಂದು ಕೂಡ ತಿಳಿದಿಲ್ಲ. ನನ್ನ ಅಸ್ತಿತ್ವವನ್ನು ನಿನ್ನೊಳಗೆ ಕಾಣಬೇಕು ಎನ್ನುವುದೇ ನನ್ನ ಒಂದೇ ಒಂದು ಕೋರಿಕೆ.
ನಿನ್ನ ಹೃದಯದಲಿ ನನ್ನನ್ನು ತುಂಬಿಕೊಳ್ಳುವೆಯ? ನೆಲೆ ಮರೆತ ಈ ಹೃದಯಕ್ಕೆ ನಿನ್ನಲ್ಲಿ ಆಶ್ರಯ ನೀಡುವೆಯ? ಕತ್ತಲು ತುಂಬಿದ ಈ ಹಾದಿಗೆ ನಂದಾದೀಪವಾಗುವೆಯ?
Subscribe to:
Posts (Atom)